1st Nov 2016

Core Group:

Nagesh TK: ಕನ್ನಡ ಬಾರದ ಊರಲ್ಲಿ

ಕನ್ನಡ ರಾಜ್ಯೋತ್ಸವ

ಆಚರಿಸಲು ಹೊರಟ

ನಾನೊಬ್ಬ ಕನ್ನಡಿಗ

ಇದು ಕರ್ನಾಟಕವೆಂದೆನಲ್ಲ

ಪಕ್ಕಕ್ಕೆ ಆಂಧ್ರದ ಗಡಿ ಇದೆಯಲ್ಲ

ಇಲ್ಲಿ ಕನ್ನಡ ಕಾರ್ಯಕ್ರಮಗಳು

ನಡೆಯುದೇ ಇಲ್ಲ ಕಾರಣ

ಸಂಘಟನಾಕಾರರು ಬಂದು

ಹೋಗಲು ಸೂಕ್ತ ರಸ್ತೆಗಳಿಲ್ಲ .

ನಾ ಟಿ ಕೆ

Kollegala Sharma: ಯಾವ ಊರು?

Nagesh TK: ಸರ್ ಗೌರಿಬಿದನೂರು ತಾಲ್ಲೊಕಿನ ಕಟ್ಟ ಕಡೆಯ ಹಳ್ಳಿ ನಂಜಯ್ಯಗಾರಹಳ್ಳಿ ,ಲೇಪಾಕ್ಷಿ ಹತ್ತಿರ

Kollegala Sharma: 23ಕ್ಕೆ ಹಿಂದೂಪುರದಲ್ಲಿ ಇರುತ್ತೇನೆ. ಅದಕ್ಕೇ ಕೇಳಿದ್ದು.

SC Nagesh TK: 👏🏻👏🏻👏🏻👏🏻💐

Lingaraj Roddanavar: ಹೆಸರಾಯಿತು ಕರ್ನಾಟಕ.

ಉಸಿರಾಗಲಿ ಕನ್ನಡ …!!!

ಕನ್ನಡ ಉಸಿರಾಗುವುದು ಹೇಗೆ….?

ಇಂದಿನ ಪೀಳಿಗೆಯ ನಾವು ಹೊಸ ತಂತ್ರಜ್ಞಾನದ ಫೊನಗಳನ್ನೇ ಉಸಿರಾಗಿಸಿಕೊಂಡಿದ್ದೇವೆ. ಈ ಫೋನಗಳಲ್ಲಿ ಕನ್ನಡ ಬಳಕೆ ಹೆಚ್ಚಾದಲ್ಲಿ ಕನ್ನಡ ನಮ್ಮ ಉಸಿರಾಗುತ್ತದೆ. ಬಹುತೇಕ ಎಲ್ಲ ಮೊಬೈಲ್ ಗಳಲ್ಲೂ ಕನ್ನಡ ಬಳಕೆಗೆ ಅವಕಾಶ ಮಾಡಿದ್ದಾರೆ.  ಮತ್ತ್ಯಾಕೆ ಕನ್ನಡ ಬಳಸಲು ಹಿಂದೇಟು…..?

ನವಂಬರ್ ೧ಕ್ಕೆ

ಜೈ ಕರ್ನಾಟಕ ಮಾತೆ.

ಸಿರಿಗನ್ನಡಂ ಬಾಳ್ಗೆ….

ಕನ್ನಡವೇ ಸತ್ಯ. ಕನ್ನಡವೇ ನಿತ್ಯ.

 

ಎಂದು ಅಬ್ಬರಿಸಿ ಬೊಬ್ಬಿರಿದರೆ ಏನ್ ಬಂತು.

ಚಾಟಿಂಗ್ ಗಳಲ್ಲಿ,  ಫೇಸ್ ಬುಕ್ ವಾಲ್ ಪೋಸ್ಟ್ಗಳಲ್ಲಿ ಕನ್ನಡ ಬಳಸೋಕೆ ಏನ್ರೀ ಧಾಡೀ…??!!!

ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ

ಅದು ನಿತ್ಯೋತ್ಸವವಾಗಲಿ.

ವಾಟ್ಸಪ್,  ಫೇಸ್ ಬುಕ್ ಗಳಲ್ಲಿ ಕನ್ನಡವನ್ನೇ ಬಳಸೋಣ. ಕನ್ನಡ ಟೈಪಿಂಗ್ ಗೆ ಅನೇಕ ಅಪ್ಲಿಕೇಶನ್ ಗಳಿವೆ. ಅದರಲ್ಲೂ Just Kannada ಎನ್ನುವ ಅಪ್ಲಿಕೇಶನ್ ಭಾಳ ಚೊಲೊ ಐತಿ. ನಮಗೆ ಅನುಕೂಲವಾಗುವ ಒಂದನ್ನು ಡೌನ್ಲೋಡ್ ಮಾಡಿ ಕನ್ನಡವನ್ನ ಬಳಸೋಣ.

ಆವಾಗಲೇ,

ಕನ್ನಡ ನಿತ್ಯವಾಗುವುದು, ಸತ್ಯವಾಗುವುದು…….

ಕನ್ನಡ ಉತ್ಸವ ನಿತ್ಯೋತ್ಸವವಾಗುವುದು…

ನವೆಂಬರ್ ಕನ್ನಡಿಗರಾಗದೇ, ನಿತ್ಯ ಕನ್ನಡಿಗರಾಗೋಣ….

Girish : ತಮಗೂ  ಕನ್ನಡ ರಾಜ್ಯೋತ್ಸವದ ಶುಭಾಶಯಗಳು……ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡೋಣ

Kindly avoid wishes

Chowdaiah Niru: ಕನ್ನಡ ಮರೆಯುವುದು ಬೇಡ… ಬನ್ನಿ ಕನ್ನಡ ಕಲಿಯೋಣ/ಕಲಿಸೋಣ.I

 

  • ಕನ್ನಡ ವರ್ಣಮಾಲೆ
  • ಸಂಧಿ ಪ್ರಕರಣ
  • ನಾಮ ಪದ ಪ್ರಕರಣ
  • ಲಿಂಗಳು
  • ವಚನಗಳು
  • ವಿಭಕ್ತಿ ಪ್ರತ್ಯಯಗಳು
  • ಕ್ರಿಯಾಪದ ಪ್ರಕರಣ
  • ಕರ್ತರಿ ಮತ್ತು ಕರ್ಮಣಿ ಪ್ರಯೋಗಗಳು
  • ಛಂದಸ್ಸು
  • ಷಟ್ಟದಿ ಪದ್ಯಗಳು
  • ರಗಳೆಗಳು
  • ಅಕ್ಷರ ಗಣಗಳು
  • ಅಲಂಕಾರಗಳು
  • ನವರಸಗಳು
  • ಪತ್ರಲೇಖನ
  • ಪ್ರಬಂಧ

 

🙏🙏🙏🙏🙏🙏

ಕನ್ನಡ ವ್ಯಾಕರಣ

“ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು”..

ಕನ್ನಡ ವರ್ಣಮಾಲೆ

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

 

ವರ್ಣಮಾಲೆಯ ವಿಧಗಳು

*.ಸ್ವರಗಳು

*.ವ್ಯಂಜನಗಳು

*.ಯೋಗವಾಹಗಳು

ಸ್ವರಗಳು:13

“ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ”.

ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳ ವಿಧಗಳು

*.ಹ್ರಸ್ವಸ್ವರ

*.ದೀರ್ಘ ಸ್ವರ

*.ಪ್ಲುತ ಸ್ವರ

ಹ್ರಸ್ವ ಸ್ವರ: 6

“ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು”.

ಉದಾ:ಅ ಇ ಉ ಋ ಎ ಒ

ದೀರ್ಘ ಸ್ವರ: 7

“ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”.

ಉದಾ:ಆ ಈ ಊ ಏ ಓ ಐ ಔ

ಪ್ಲುತ ಸ್ವರ:

“ಮೂರು ಮಾತ್ರೆಗಳ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ

”.ಉದಾ:ಅಕ್ಕಾ , ಅಮ್ಮಾ,

ಕ್+ಅ=ಕ ,

ಮ್+ಅ=ಮ,

ಯ್+ಅ=ಯ.

ಸಂಧ್ಯಾಕ್ಷರಗಳು:4

ಏ,ಐ,ಒ,ಔ,

ವ್ಯಂಜನಗಳು:34

“ಸ್ವರಾಕ್ಷರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ”.

ವ್ಯಂಜನಗಳ ವಿಧಗಳು:2

1.ವರ್ಗೀಯ ವ್ಯಂಜನಾಕ್ಷರಗಳು

2.ಅವರ್ಗೀಯ ವ್ಯಂಜನಾಕ್ಷರಗಳು

 

ವರ್ಗೀಯ ವ್ಯಂಜನಾಕ್ಷರಗಳು:25

“ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.

ಉದಾ:

ಕ ವರ್ಗ – ಕ ಖ ಗ ಘ ಙ

ಚ ವರ್ಗ – ಚ ಛ ಜ ಝ ಞ

ಟ ವರ್ಗ – ಟ ಠ ಡ ಢ ಣ

ತ ವರ್ಗ- ತ ಥ ದ ಧ ನ

ಪ ವರ್ಗ- ಪ ಫ ಬ ಭ ಮ

 

ವರ್ಗೀಯ ವ್ಯಂಜನಾಕ್ಷರಗಳ ವಿಧಗಳು

*.ಅಲ್ಪ ಪ್ರಾಣಾಕ್ಷರಗಳು

*.ಮಹಾ ಪ್ರಾಣಾಕ್ಷರಗಳು

*.ಅನುನಾಸಿಕಾಕ್ಷರಗಳು

ಅಲ್ಪ ಪ್ರಾಣಾಕ್ಷರಗಳು:10

“ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ”.

ಉದಾ:

ಕ, ಚ,ಟ.ತ ,ಪ

ಗ,ಜ,ಡ,ದ,ಬ

ಮಹಾ ಪ್ರಾಣಾಕ್ಷರಗಳು:10

“ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ

ಉದಾ:

ಖ, ಛ ,ಠ ,ಧ, ಫ

ಘ ,ಝ, ಢ, ಧ, ಭ

 

ಅನುನಾಸಿಕಾಕ್ಷರಗಳು:5

“ಮೂಗಿನ ಸಹಾಯದಿಂದುಚ್ಛರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ”.

ಉದಾ:

ಙ ,ಞ ,ಣ, ನ, ಮ

 

ಅವರ್ಗೀಯ ವ್ಯಂಜನಾಕ್ಷರಗಳು:9

“ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು”.

ಉದಾ:

ಯ ,ರ, ಲ, ವ ,ಶ, ಷ ,ಸ ,ಹ, ಳ

 

ಯೋಗವಾಹಗಳು:2

“ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ”.

ಅಂ ಅಃ

 

ಯೋಗವಾಹಗಳ ವಿಧಗಳು

1.ಅನುಸ್ವರ ಂ

2.ವಿಸರ್ಗ ಃ

 

ಅನುಸ್ವರ {ಂ}

“ಯಾವುದೇ ಅಕ್ಷರವು ಒಂದು ಸೊನ್ನೊ(ಂ) ಬಿಂದು, ಎಂಬ ಸಂಕೇತನವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು”,

ಉದಾ:ಅಂಕ , ಒಂದು, ಎಂಬ

 

ವಿಸರ್ಗ {ಃ}

“ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೊಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು”,

ಉದಾ:ಅಂತಃ , ದುಃಖ, ಸಃ, ನಃ

 

 

🙏🙏🙏🙏🙏

 

 

ಕನ್ನಡ ವರ್ಣಮಾಲೆ ಒಟ್ಟು ಅಕ್ಷರಗಳು ಸಂಖ್ಯೆ

 

ಕನ್ನಡ ವರ್ಣಮಾಲೆ(49)

ಸ್ವರಗಳು(13)

ಹ್ರಸ್ವ(06) ,

ಧೀರ್ಘ(07) ,

ಪ್ಲುತ

ವ್ಯಂಜನಾಕ್ಷರಗಳು(34)

ವರ್ಗೀಯ(25){ಅಲ್ಪಪ್ರಾಣ(10) , ಮಹಾಪ್ರಾಣ(10) , ಅನುನಾಸಿಕ(05) } ,

ಅವರ್ಗೀಯ(09)

ಯೋಗವಾಹ(02)

ಅನುಸ್ವಾರ(ಂ) ,

ವಿಸರ್ಗ(ಃ)

 

ಸಂಯುಕ್ತಾಕ್ಷರ

“ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ / ಒತ್ತಕ್ಷರ ಎಂದು ಕರೆಯುತ್ತೇವೆ”.

ಉದಾ:

ಕ್ + ತ್ + ಅ = ಕ್ತ

ಪ್ + ರ್ + ಅ = ಪ್ರ

ಗ್ + ಗ್ + ಅ = ಗ್ಗ

ಸ್ + ತ್ + ರ್ + ಅ = ಸ್ತ್ರ

 

ಸಂಯುಕ್ತಾಕ್ಷರಗಳ ವಿಧಗಳು

1.ಸಜಾತಿಯ ಸಂಯುಕ್ತಾಕ್ಷರಗಳು

2.ವಿಜಾತೀಯ ಸಂಯುಕ್ತಾಕ್ಷರಗಳು

 

ಸಂಜಾತಿಯ ಸಂಯುಕ್ತಾಕ್ಷರಗಳು

“ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ”.

ಉದಾ:

ಕತೇ – ಕ್ + ತ್ + ತ್ + ಎ

ಅಕ್ಕ – ಅ + ಕ್ + ಕ್ + ಅ

ಹಗ್ಗ , ಅಜ್ಜ , ತಮ್ಮ , ಅಪ್ಪ

 

ವಿಜಾತಿಯ ಸಂಯುಕ್ತಾಕ್ಷರಗಳು

“ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ”.

ಉದಾ:

ಅಗ್ನಿ- ಆ + ಗ್ + ನ್ + ಇ

ಆಪ್ತ – ಆ + ಪ್ + ತ್ + ಅ

ಸೂರ್ಯ , ಮಗ್ನ , ಸ್ವರ , ಪ್ರಾಣ

 

 

🙏🙏🙏🙏🙏

 

ಸಂಧೀ ಪ್ರಕರಣ

 

ಸಂಧಿ ಅರ್ಥ :

” ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು “.

ಉದಾ:

ಗಾಣ + ಇಗ =ಗಾಣಿಗ

ಆಡು + ಇಸು =ಆಡಿಸು

ಹಸು + ಇನ =ಹಸುವಿನ

‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.

 

ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು

*.ಸ್ವರ ಸಂಧಿ :

” ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು”.

ಉದಾ:

ಊರು(ಉ) + (ವ) ಅನ್ನು = ಊರನ್ನು

ಮನೆ(ಎ) + (ಅ) ಅಲ್ಲಿ =ಮನೆಯಲ್ಲಿ

 

*.ವ್ಯಂಜನ ಸಂಧಿ :

“ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು ವ್ಯಮಜನ ಸಂಧಿ ಎನಿಸುವುದು “.

ಉದಾ:

ಮಳೆ(ಕ) + (ಗ)ಕಾಲ =ಮಳೆಗಾಲ

ಬೆಟ್ಟದ(ತ) + (ದ)ತಾವರೆ =ಬೆಟ್ಟದಾವರೆ

 

ಸಂಧಿಗಳ ವಿದಗಳು:

1.ಕನ್ನಡ ಸಂಧಿಗಳು

2.ಸಂಸ್ಕ

ೃತ ಸಂಧಿಗಳು

 

ಕನ್ನಡ ಸಂಧಿಗಳ ವಿಧಗಳು

1.ಲೋಪ ಸಂಧಿ

2.ಆಗಮ ಸಂಧಿ

3.ಆದೇಶ ಸಂಧಿ

4.ಪ್ರಕ್ಥತ ಭಾವ

 

ಲೋಪ ಸಂಧಿ :

” ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು

ಉದಾ:

ಹಣದಾಸೆ – ಹಣದ + ಆಸೆ “ಅ” ಕಾರಲೋಪ

ನಿನಗಲ್ಲದೆ – ನಿನಗೆ +ಅಲ್ಲದೆ “ಎ”ಕಾರಲೋಪ

ಅಲ್ಲೊಂದು – ಅಲ್ಲಿ +ಒಂದು “ಇ” ಕಾರಲೋಪ

ಊರಲ್ಲಿ – ಊರು +ಅಲ್ಲಿ “ಉ” ಕಾರಲೋಪ

 

ಆಗಮ ಸಂಧಿ :

” ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಾಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೆಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”.

ಆಗಮ ಸಂಧಿಯ ವಿಧಗಳು

ಎ: ‘ಯ’ ಕಾರ ಆಗಮ ಸಂಧಿ

ಬಿ: ‘ವ’ ಕಾರ ಆಗಮ ಸಂಧಿ

 

‘ಯ’ ಕಾರ ಆಗಮ ಸಂಧಿ :

” ಆ ಇ ಈ ಎ ಏ ಐ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವು ಆಗಮವಾಗುವುದು”.

ಉದಾ:

ಕೆರೆಯನ್ನು = ಕೆರೆ + ಅನ್ನು

ಕಾಯದೆ = ಕಾ + ಅದೆ

ಬೇಯಿಸಿದ = ಬೇ + ಇಸಿದ

ಕುರಿಯನ್ನು , ಮೀಯಲು , ಚಳಿಯಲ್ಲಿ

 

‘ವ’ ಕಾರ ಆಗಮ ಸಂಧಿ :

“ಅ ಉ ಊ ಋ ಓ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ನಡುವೆ “ವ” ಕಾರವೂ ಆಗಮವಾಗುವುದು”.

ಉದಾ:

ಮಗುವಿಗೆ =ಮಗು + ಇಗೆ

ಗುರುವನ್ನು = ಗುರು + ಅನ್ನು

ಹೂವಿದು= ಹೂ + ಇದು

ಗೋವಿಗೆ , ಶಾಂತವಾಗಿ , ರಸವಾಗಿ ,

 

ಆದೇಶ ಸಂಧಿ :”ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”.

ಕ – ಗ

ಚ – ಜ

ಟ – ಡ

ತ – ದ

ಪ – ಬ

ಉದಾ:

ಮಳೆಗಾಲ =ಮಳೆ +ಕಾಲ

ಕಂಬನಿ = ಕಣ್ + ಪನಿ

ಕೈದಪ್ಪು = ಕೈ + ತಪ್ಪು

ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ,

 

ಪ್ರಕೃತಿ ಭಾವ ಸಂಧಿ:

“ಕೆಲವೆಡೆ ಸ್ವರಕ್ಕೆ ಸ್ವರ ಪರವಾದರೆ ಯಾವ ಸಂಧಿಕಾರ್ಯವು ನಡೆಯುವುದಿಲ್ಲ ಇದನ್ನು ಪ್ರಕೃತಿ ಭಾವ ಎಂದು ಕರೆಯುತ್ತಾರೆ “.

ಉದಾ:

ಅಣ್ಣ ಓಡಿಬಾ = ಅಣ್ಣ + ಓಡಿಬಾ

ಅಬ್ಬಾ ಅದುಹಾವೆ? = ಅಬ್ಬಾ + ಅದುಹಾವೆ?

ರಾಮ ಎಲ್ಲಿದ್ದೀಯೆ? = ರಾಮ + ಎಲ್ಲಿದ್ದೀಯೆ?

 

ಸಂಸ್ಕೃತ ಸಂಧಿಗಳ ವಿಧಗಳು

1.ಸಂಸ್ಕೃತ ಸ್ವರ ಸಂಧಿಗಳು

2.ಸಂಸ್ಕೃತ ವ್ಯಂಜನ ಸಂಧಿಗಳು

 

ಸಂಸ್ಕೃತ ಸ್ವರ ಸಂಧಿಗಳ ವಿಧಗಳು

1.ಸವರ್ಣ ದೀರ್ಘ ಸಂಧಿ

2.ಗುಣ ಸಂಧಿ

3.ವೃದ್ಧಿ ಸಂಧಿ

4.ಯಣ್ ಸಂಧಿ

 

ಸವರ್ಣ ದೀರ್ಘ ಸಂಧಿ

” ಸವರ್ಣ ಸ್ವರಗಳು ಬಂದರೆ ಮುಂದೊಂದು ಬಂದಾಗ, ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘ ಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುವರು

“.ಅ-ಅ=ಆ ,

ಅ-ಆ=ಆ,

ಇ-ಇ=ಈ ,

ಇ-ಈ=ಈ

ಉ-ಉ=ಊ ,

ಉ-ಊ=ಊ

 

ಉದಾ:

ದೇವಾಲಯ= ದೇವ + ಆಲಯ

ವಿದ್ಯಾಭ್ಯಾಸ= ವಿದ್ಯಾ + ಅಭ್ಯಾಸ

ಗಿರೀಶ= ಗಿರಿ + ಈಶ

ಗುರೂಪದೇಶ= ಗುರು + ಉಪದೇಶ

ಶುಭಾಶಯ , ರವೀಂದ್ರ , ದೇವಾಸುರ , ಫಲಾಹಾರ , ಸೂರ್ಯಸ್ತ.

 

ಗುಣ ಸಂಧಿ

“ಅ .ಆ ಕಾರಗಳ ಮುಂದೆದ ಇ.ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಏ” ಕಾರವೂ. ಉ.ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಓ” ಕಾರವೂ , ಋ ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ “ಅರ್” ಕಾರವೂ ಆದೇಶವಾಗಿ ಬಂದರೆ ಅಂತಹ ಸಂಧಿಯನ್ನು “ಗುಣಸಂಧಿ” ಎಂದು ಕರೆಯಲಾಗುತ್ತದೆ”.

ಅ-ಆ,

ಇ-ಈ=ಏ

ಅ-ಆ,

ಉ-ಊ=ಓ

ಅ-ಆ,ಋ=ಅರ್

 

ಉದಾ:

ದೇವೇಂದ್ರ=ದೇವ + ಇಂದ್ರ

ಸಪ್ತರ್ಷಿ=ಸಪ್ತ + ಋಷಿ

ಸುರೇಂದ್ರ=ಸುರ + ಇಂದ್ರ

ಜನೋಪಕಾರ=ಜನ + ಉಪಕಾರ

ನಾಗೇಶ , ಏಕೋನ , ಚಂದ್ರೋದಯ ,ಉಮೇಶ

 

ವೃದ್ಧಿ ಸಂಧಿ

“ಅ.ಆ ಕಾರಗಳಿಗೆ ಏ .ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಐ” ಕಾರವೂ. ಓ .ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಔ” ಕಾರವೂ ಆದೇಶವಾಗಿ ಬರುತ್ತದೆ ಇದಕ್ಕೆ ವೃದ್ದಿ ಸಂಧಿ ಎನ್ನುವರು”.

ಅ,ಆ-ಏ,

ಐ=ಐಅ,

ಆ-ಒ,

ಓ=ಔ

 

ಉದಾ:

ಏಕೈಕ= ಏಕ + ಏಕ

ವನೌಷಧಿ=ವನ + ಔಷಧಿ

ಜನೈಕ್ಯ=ಜನ + ಐಕ್ಯ

ವನೌಷಧ , ಸಿದ್ಧೌಷದ , ಲೋಕೈಕವೀರ

 

ಯಣ್ ಸಂಧಿ

“ಇ ,ಈ ಕಾರಗಳ ಮುಂದೆ ಅ ,ಆ ಕಾರಗಳು ಪರವಾದರೆ ಅವೆರಡರಸ್ಥಾನದಲ್ಲಿ “ಯ್” ಕಾರವೂ. ಉ ,ಊ ಕಾರಗಳಿಗೆ “ವ್” ಕಾರವೂ ಋ ಕಾರಕ್ಕೆ ‘ರ್’ ಕಾರವೂ ಆದೇಶಗಳಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವರು”

ಇ,ಈ-ಅ,ಆ=’ಯ್’

ಉ,ಊ-ಅ,ಆ=’ವ್’

ಋ-ಅ,ಆ=’ರ್’

ಉದಾ:

ಪ್ರತ್ಯುತ್ತರ= ಪ್ರತಿ +ಉತ್ತರ

ಮನ್ವಂತರ= ಮನು +ಅಂತರ

ಜಾತ್ಯಾತೀತ=ಜಾತಿ +ಅತೀತ

ಮಾತ್ರಂಶ=ಮಾತೃ +ಅಂಶ

ಅತ್ಯವಸರ , ಮನ್ವಾದಿ , ಅತ್ಯಾಶೆ , ಗತ್ಯಂತರ

 

ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು

1.ಜಶ್ತ್ವ ಸಂಧಿ

2.ಶ್ಚುತ್ವ ಸಂಧಿ

3.ಅನುನಾಸಿಕ ಸಂಧಿ

 

ಜಶ್ತ್ವ ಸಂಧಿ

“ಪೂರ್ವ ಪದದ ಕೊನೆಯಲ್ಲಿರುವ ಕ,ಚ,ಟ,ತ,ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ವ್ಯಂಜನಾಕ್ಷರಗಳಾದ ಗ,ಜ,ಡ,ದ,ಬ ಗಳು ಆದೇಶವಾಗಿ ಬರುವುದಕ್ಕೆ ಜಶ್ತ್ವ ಸಂಧಿ ಎಂದು ಹೆಸರು”.

ಉದಾ:

ವಾಗೀಶ=ವಾಕ್ + ಈಶ

ಅಜಂತ=ಅಚ್ + ಅಂತ

ಷೆಡಂಗ=ಷಟ್ +ಅಂಗ

ಸದ್ಭಾವ=ಸತ್ +ಭಾವ

ಅಜ್ಜ=ಅಪ್ + ಜ

ದಿಗಂತ , ಅಜೌದಿ , ಷಡಾನನ , ಚಿದಾನಂದ , ಅಬ್ಧಿ

 

ಶ್ಚುತ್ವ ಸಂಧಿ

” ಶ್ಚು ಎಂದರೆ ಶಕಾರ ಚ ವರ್ಗಾಕ್ಷರಗಳು(ಶ್ ಶಕಾರ ಚು=ಚ ವ ಜ ಝ ಞ) ಈ ಆರು ಅಕ್ಷರಗಳೇ “ಶ್ಚು” ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳು ತ್ತವೆ. ಇವುಗಳು ಆದೇಶವಾಗಿ ಬರುವುದಕ್ಕೆ ಶ್ಚುತ್ವ ಸಂಧಿ ಎಂದು ಹೆಸರು”.

ಸ ಕಾರಕ್ಕೆ – ಶ ಕಾರವು

ತ ವರ್ಗಕ್ಕೆ- ಚ ವರ್ಗವು (ಆದೇಶವಾಗಿ ಬರುತ್ತವೆ)

 

ಉದಾ:

ಸಜ್ಜನ=ಸತ್ +ಜನ

ಚಲಚಿತ್ರ= ಚಲತ್ + ಚಿತ್ರ

ಯಶಶ್ಯರೀರ=ಸರತ್ +ಚಂದ್ರ

ಜಗಜ್ಯೋತಿ, ಪಯಶ್ಯಯನ, ಶರಚ್ಚಂದ್ರ

 

ಅನುನಾಸಿಕ ಸಂಧಿ

“ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ನ ಣ ಮ ಗಳು ಆದೇಶವಾಗಿ ಬರುವುದಕ್ಕೆ ಅನುನಾಸಿಕ ಸಂಧಿ ಎಂದು ಹೆಸರು”.

ಉದಾ.

ವಾಙ್ಮಯ=ವಾಕ್ +ಮಯ

ಚಿನ್ಮೂರ್ತಿ= ಚಿತ್ + ಮೂರ್ತಿ

ತನ್ಮಯ= ತತ್+ಮಯ

ಸನ್ಮಾನ , ಅಮ್ಮಯ , ಸನ್ಮಣಿ ,ಚಿನ್ಮೂಲ ,

 

 

🙏🙏🙏🙏🙏

 

ಸಮಾಸ ಪ್ರಕರಣ

 

“ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು”.

ಉದಾ:

ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು

ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

 

ವಿಗ್ರಹ ವಾಕ್ಯ

“ಸಮಾಸದ ಅ

ರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು”.

ಉದಾ:

ಸಮಸ್ತಪದ = ಪೂರ್ವಪದ + ಉತ್ತರ ಪದ

ದೇವಮಂದಿರ= ದೇವರ + ಮಂದಿರ

ಹೆಜ್ಜೇನು=ಹಿರಿದು + ಜೇನು

ಮುಂಗಾಲು= ಕಾಲಿನ + ಮುಂದು(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ.)

 

ಸಮಾಸ ಪದಗಳಾಗುವ ಸನ್ನಿವೇಶಗಳು

ಸಂಸ್ಕ್ರತ-ಸಂಸ್ಕ್ರತ ಶಬ್ಧಗಳು ಸೇರಿ

ಕನ್ನಡ-ಕನ್ನಡ ಶಬ್ಧಗಳು ಸೇರಿ

ತದ್ಬವ-ತದ್ಬವ ಶಬ್ಧಗಳು ಸೇರಿ

ಅಚ್ಚಗನ್ನಡ ಶಬ್ಧ – ತದ್ಬವ ಶಬ್ಧಗಳು ಸೇರಿ ಸಮಾಸಪದಗಳಾಗುತ್ತವೆ.

ಆದರೆ

ಕನ್ನಡಕ್ಕೆ – ಸಂಸ್ಕ್ರತ ಶಬ್ಧಗಳು ಸೇರಿ ಸಮಾಸವಾಗಲಾರದು.ವೀರ ಗಳು

 

ಸಮಾಸದ ವಿಧಗಳು

1.ತತ್ಪುರುಷ ಸಮಾಸ

2.ಕರ್ಮಧಾರೆಯ ಸಮಾಸ

3.ದ್ವಿಗು ಸಮಾಸ

4.ಅಂಶಿ ಸಮಾಸ

5.ದ್ವಂದ್ವ ಸಮಾಸ

6.ಬಹುವ್ರೀಹಿ ಸಮಾಸ

7.ಕ್ರಿಯಾ ಸಮಾಸ

8.ಗಮಕ ಸಮಾಸ

 

ತತ್ಪುರುಷ ಸಮಾಸ

“ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು”.

ಉದಾ:

ಮರದ+ಕಾಲ =ಮರಗಾಲ

ಬೆಟ್ಟದ+ತಾವರೆ =ಬೆಟ್ಟದಾವರೆ

ಕೈ+ತಪ್ಪು = ಕೈತಪ್ಪು

ಹಗಲಿನಲ್ಲಿ+ಕನಸು =ಹಗಲುಗನಸು

ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು

 

ಕರ್ಮಧಾರೆಯ ಸಮಾಸ

“ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ”.

ಉದಾ:

ಹೊಸದು+ಕನ್ನಡ =ಹೊಸಗನ್ನಡ

ಹಿರಿದು+ಜೇನು =ಹೆಜ್ಜೇನು

ಕಿರಿಯ+ಗೆಜ್ಜೆ =ಕಿರುಗೆಜ್ಜೆ

ಕೆಂದುಟಿ, ಚಿಕ್ಕಮಗು, ಸಿಡಿಮದ್ದು , ಪಂದತಿ

 

ದ್ವಿಗು ಸಮಾಸ

“ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ”

ಉದಾ:

ಒಂದು + ಕಣ್ಣು = ಒಕ್ಕಣ್ಣು

ಎರಡು+ಬಗೆ=ಇಬ್ಬಗೆ

ಸಪ್ತ+ಸ್ವರ=ಸಪ್ತಸ್ವರ

ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು

 

ಅಂಶಿ ಸಮಾಸ

“ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು”.

ಅಂಶವೆಂದರೆ ‘ಭಾಗ’ ಅಥವಾ ‘ಅವಯವ’

ಉದಾ:ತಲೆಯ+ಮುಂದು=ಮುಂದಲೆ

ಬೆರಳಿನ+ತುದಿ = ತುದಿಬೆರಳು

ಕರೆಯ+ಒಳಗು= ಒಳಗೆರೆ

ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ

 

ದ್ವಂದ್ವ ಸಮಾಸ

“ಎರಡು ಅಥವಾ ಉಳ್ಳ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು”

.ಉದಾ:

ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು

ಕಾಫಿಯೂ+ತಿಂಡಿಯೂ=ಕಾಫಿ-ತಿಂಡಿ

ಬೆಟ್ಟವೂ+ಗುಡ್ಡವೂ=ಬೆಟ್ಟಗುಡ್ಡಗಳು

ಅಣ್ಣನು +ತಮ್ಮನು= ಅಣ್ಣತಮ್ಮಂದಿರು

Girish : Hope all teachers know above and adopt……if not how to implement

Nagaraju M added ‪+91 9  ….

Nagaraju M: Surprise Mile ~ Stone ;

 

Dear all Sri Premji

 

Today, recieved Rajyotsava Award for Social work in Mandya & Maddur from

Govt of Karnataka. Maddur MLA Sri Thamanna & Thashildar Sri.Harsha presided over the Function.

Thanks for the recognition.

It gives me more Strength to work better for the Society.

 

And also good volunteer for developing our government school development projects

 

<Media omitted>

Nagaraj Puttur: Congratulations sir

‪+91 90 …..: Heartily Congratulations 💐

Rakesh Gowda: Congratulations sir

Chandrakant Acharya: 👏🏼👏🏼👏🏼💐

‪+91 9  ….: 🙏🏾Thank you all and my role model Nagaraj

Yogish: Congratulations Nagaraj 👍

Leelavathi: Congrats premkumar sir

Nagaraju M: Dear yogish sir.. prem sir is working for rural programs since nearly 15yrs.. bcz of his commitments today soceity identified. ..prem sir got this news (selection for award) just yesterday night. …

Yogish: Excellent. Congratulations to Prem and to entire team 👍

Nagaraju M: Dear prem sir I would like to introduce this group … this group is working for government school development projects. . Here we share only govt anganavaadi  &  school development details. .. welcome sir💐🙏

Panchappa: Did anybody give information about that chained girl?

Congratulation Prem sir.

Kotresh Mydur: ಇಂದು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಾ ಕೊ(ಕ)೦ಡುಕೊಂಡ ಹೊತ್ತಗೆಗಳು.ರಿಯಾಯಿತಿ ದರದಲ್ಲಿ ಪುಸ್ತಕಗಳು ದೊರೆಯುತ್ತಿದ್ದು ,ಆಸಕ್ತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.🙏 🙏 🙏

HM Sunitha: Thanks for the info

Kotresh Mydur: Can make use of it.. Nice books are there..🙏 🙏

Can spread the info. As much as possible🙏 🙏

HM Sunitha: Yes true worth banking on

‪+91 94 ….: 🙏🏾Thank you brother s

91 9  …….: *1ನೇ ತರಗತಿಯಿಂದ ಇಂಗ್ಲಿಷ್ ಭಾಷೆ ಕಲಿಸಬೇಕು*

Oct 29, 2016

(MAHANTAGOUD T PATIL SWCM KSPSTA)

 

*ಪ್ರಾಥಮಿಕ ಹಂತದ ಶಿಕ್ಷಣವನ್ನು ಮಾತೃ ಭಾಷೆ ಅಥವಾ ರಾಜ್ಯ ಭಾಷೆಯಲ್ಲಿ ಕಲಿಸುವುದು ಕಡ್ಡಾಯವಾದರೂ, ಒಂದನೇ ತರಗತಿಯಿಂದಲೇ ಇಂಗ್ಲಿಷ್ ಅನ್ನು ಕೂಡ ಒಂದು ಭಾಷೆಯನ್ನಾಗಿ ಕಲಿಸಬೇಕು.*

 

*1ರಿಂದ 5ನೇ ತರಗತಿವರೆಗೆ ಮಾತೃ ಭಾಷೆ ಅಥವಾ ರಾಜ್ಯ ಭಾಷೆಯಲ್ಲಿ ಶಿಕ್ಷಣ ಕಲಿಸಬೇಕೆಂಬು ದನ್ನು ಸಂವಿಧಾನವೇ ಹೇಳಿದೆ. ಈ ಸಂಬಂಧ 1994ರಲ್ಲಿ ಸರಕಾರ ಹೊರಡಿಸಿದ ಆದೇಶ ಕೂಡ ಸರಿಯಾಗಿದೆ. ಸಂವಿಧಾನದ 344ರಿಂದ 378ರವರೆಗಿನ ವಿಧಿಗಳು ಕೂಡ ಮಾತೃ ಭಾಷೆಯಲ್ಲೇ ಶಿಕ್ಷಣ ಕಲಿಸಬೇಕೆಂದು ಹೇಳುತ್ತವೆ. ಆದರೆ, 350ನೇ ‘ಎ’ ವಿಧಿಯಿಂದ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ಇದೆ. ಮಾತೃ ಭಾಷೆಯಲ್ಲಿ ಕಡ್ಡಾಯ ಶಿಕ್ಷಣ ಕಲಿಸುವ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವ ಬಗ್ಗೆ ರಾಜಕಾರಣಿಗಳು ಹಾಗೂ ಚಿಂತಕರು ಚಿಂತನೆ ನಡೆಸಬೇಕಾಗಿದೆ. ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಯುವ ಮಕ್ಕಳಿಗೆ ಉದ್ಯೋಗ ಸಿಗುವುದಿಲ್ಲವೆಂದು ಹೇಳಲಾಗದು. ಆದರೆ, ಇಂದು ನಮ್ಮ ಮಕ್ಕಳಿಗೆ ಇಂಗ್ಲಿಷ್ ಅನ್ನು ಕೇವಲ ಕಾಟಾಚಾರಕ್ಕೆ ಕಲಿಸಲಾಗುತ್ತಿದೆ. ಅದರ ಬದಲು ಒಂದು ಭಾಷೆಯಾಗಿ ಕಲಿಸುವ ಅಗತ್ಯವಿದೆ. ಇದರಿಂದ ಪ್ರಸ್ತುತ ಸರಕಾರಿ ಶಾಲಾ ಸಮಸ್ಯೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಹಾರಾಷ್ಟ್ರದಲ್ಲಿ ಮರಾಠಿ ಜತೆಗೆ ಇಂಗ್ಲಿಷ್ ಭಾಷೆಯನ್ನೂ ಅತ್ಯಂತ ಪರಿಣಾಮಕಾರಿಯಾಗಿ ಕಲಿಸಲಾಗುತ್ತದೆ. ಹೀಗಾಗಿ, ಅಲ್ಲಿನ ಸರಕಾರಿ ಮರಾಠಿ ಶಾಲೆಗಳು ಯಶಸ್ವಿಯಾಗಿ ನಡೆಯುತ್ತಿವೆ. ನಾವು ಕೂಡ ಅಂತಹ ಸಂಕಲ್ಪ ಮಾಡಬೇಕಿದೆ*.

 

*ವಸ್ತ್ರಸಂಹಿತೆ ಬೇಡ*

 

*ಪ್ರೌಢಶಾಲಾ ಹಂತದವರೆಗೆ ಮಾತ್ರ ವಸ್ತ್ರಸಂಹಿತೆ ಇರಲಿ. ಆದರೆ, ಕಾಲೇಜು ಹಂತದಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಬಾರದು. ಈ ಸಂಬಂಧ ಸರಕಾರ ಆದೇಶ ಹೊರಡಿಸಬೇಕು. ಎಳೆ ವಯಸ್ಸಿನ ಮಕ್ಕಳಲ್ಲಿ ಬಡವ- ಬಲ್ಲಿದ ಎಂಬ ತಾರತಮ್ಯ ಇರಬಾರದು ಎನ್ನುವ ಕಾರಣಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲಾಯಿತು. ಆದರೆ, ಕಾಲೇಜು ಹಂತದಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಬಾರದು. ಈ ಹಂತದಲ್ಲಿ ಬಟ್ಟೆ ಧರಿಸುವ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೇ ಬಿಡಬೇಕು.ಸಲಅವಕ ಅದು ಒಂದು ರೀತಿಯಲ್ಲಿ ಆಸೆಯ ವಯಸ್ಸು. ಹೀಗಾಗಿ, ವಿದ್ಯಾರ್ಥಿಗಳಿಗೂ ತಮಗಿಷ್ಟವಾದ ಬಟ್ಟೆ ಧರಿು ಾಶ ಕೊಡಬೇಕು. ಆದರೆ, ಸಭ್ಯತೆ-ಎಲ್ಲೆ ಮೀರಿದ ಸಮವಸ್ತ್ರ ಧರಿಸಬಾರದು. ವಸ್ತ್ರ ಸಂಹಿತೆ ಅತ್ಯಂತ ಸಣ್ಣ ವಿಷಯವಾದರೂ ಸೂಕ್ಷ್ಮ ವಿಚಾರ. ಇದರಿಂದ ಜಾತಿ ಅಥವಾ ಧರ್ಮದ ಹೆಸರಿನಲ್ಲಿ ಜಗಳ ನಡೆಯು ಸಾಧ್ಯತೆಗಳೂ ಇವೆ. ಹೀಗಾಗಿ ಕಾಲೇಜು ಹಂತದಲ್ಲಿ ವಸ್ತ್ರಸಂಹಿತೆ ಬೇಡ ಎನ್ನುವುದರ ಸಂಬಂಧ ಸರಕಾರ ಆದೇಶ ಹೊರಡಿಸಬೇಕು.*

 

*ಪ್ರತ್ಯೇಕತೆ ಕೂಗು ಬೇಡ*

 

*ಅಭಿವೃದ್ಧಿಯ ಅಸಮಾನತೆಯ ಹಿನ್ನೆಲೆಯಲ್ಲಿ ಪ್ರತ್ಯೇಕತೆ ಬೇಡ. ದೊಡ್ಡ ದೊಡ್ಡ ರಾಜ್ಯಗಳ ವಿಭಜನೆಯಾದ ಬಳಿಕ ಅವುಗಳ ಬೆಳವಣಿಗೆ ಯಾವ ರೀತಿಯಲ್ಲಿದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಅಭಿವೃದ್ಧಿಯ ವಿಚಾರದಲ್ಲಿ ಆ ಭಾಗಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಜವಾಬ್ದಾರಿಯೂ ಹೆಚ್ಚಿರುತ್ತದೆ. ಒಂದುಗೂಡಿ ಇರುವುದೇ ಲೇಸು ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.*

 

*ವಾಕ್ಯ ರಚನೆಯಲ್ಲೇ ತಪ್ಪು*

 

*ಕನ್ನಡ ಪುಸ್ತಕಗಳಷ್ಟೇ ಅಲ್ಲ. ಇಂಗ್ಲಿಷ್ ಭಾಷೆಯ ಬಳಕೆಯಲ್ಲೂ ತಪ್ಪುಗಳು ನುಸುಳಿವೆ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಇಂಗ್ಲಿಷ್ ಮಾಧ್ಯಮದ ಪುಸ್ತಕದಲ್ಲೂ ವಾಕ್ಯ ರಚನೆಯಲ್ಲೇ ಲೋಪಗಳಿವೆ. ನಮ್ಮ ಕಲಿಸುವ ವಿಧಾನದಲ್ಲೇ ಭಿನ್ನಾಭಿಪ್ರಾಯವಿದೆ. ಉದಾಹರಣೆಗೆ ‘ನಲಿ-ಕಲಿ’ ಒಂದು ರೀತಿಯಲ್ಲಿ ಮಕ್ಕಳು ನಲಿಯದ-ಕಲಿಯದ ಯೋಜನೆಯಾಗಿದೆ. 1ರಿಂದ 3ನೇ ತರಗತಿವರೆಗಿನ ಸರಕಾರಿ ಶಾಲೆಗಳ ಮಕ್ಕಳ ಮೇಲೆ ಈ ಪ್ರಯೋಗ ಮಾಡಲಾಗುತ್ತಿದೆ. ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಿಲ್ಲ. ಕೇವಲ ಚಟುವಟಿಕೆ ಆಧಾರಿತ ಈ ಕಲಿಕಾ ಕ್ರಮದಿಂದ ಮಕ್ಕಳ ಬರವಣಿಗೆ ಕುಂಠಿತಗೊಳ್ಳುತ್ತಿದೆ. ಯೋಜನೆ ಅನುಷ್ಠಾನಗೊಳಿಸುತ್ತಿರುವುದರಲ್ಲಿ ಅರ್ಥವಿಲ್ಲ.*

 

*ಐಐಟಿಯಲ್ಲಿ ಆದ್ಯತೆ: ರಾಷ್ಟ್ರೀಯ ನೀತಿ ಅಗತ್ಯ*

 

*ಧಾರವಾಡ ಐಐಟಿಯಲ್ಲಿ ಕರ್ನಾಟಕದವರಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿಡುವ ಸಂಬಂಧ ಕೇಂದ್ರ ಸರಕಾರ ರಾಷ್ಟ್ರೀಯ ನೀತಿ ರೂಪಿಸುವ ಅಗತ್ಯವಿದೆ ಎಂದು*

 

*ಪ್ರೊ. ಬರಗೂರು ಅಭಿಪ್ರಾಯಪಟ್ಟರು. ಐಐಟಿ ಶಿಕ್ಷಣ ಎಂದರೆ ಅದು ಸ್ವರ್ಗವ ಸಮಾನ ಶಿಕ್ಷಣ ಎಂಬ ಭಾವನೆ ಬೆಳೆದಿದೆ. ಆದರೆ, ಶಿಕ್ಷಣದಲ್ಲಿ ಆಯಾ ರಾಜ್ಯದ ಭಾಷೆ ಹಾಗೂ ಭಾಷಿಕರಿಗೆ ಆದ್ಯತೆ ಸಿಗಲು ರಾಷ್ಟ್ರೀಯ ನೀತಿ ರೂಪಿಸು ಅಗತ್ಯವಿದೆ. ಕಾರ್ಪೊರೇಟ್ ಸಂಸ್ಥೆಗಳಲ್ಲೂ ಇಂಥದ್ದೇ ಪರಿಸ್ಥಿತಿ ಇದೆ. ಭೌಗೋಳಿಕವಾಗಿ ಇಂಥ ಸಂಸ್ಥೆಗಳು ನಮ್ಮ ರಾಜ್ಯದಲ್ಲಿದ್ದರೂ ಭಾಷೆ ಹಾಗೂ ಭಾಷಿಕರಿಗೆ ಆದ್ಯತೆ ಸಿಗುತ್ತಿಲ್ಲ.*

MAHANTAGOUD T PATIL SWCM KSPSTA

*ಸಾಹಿತ್ಯ ಪರಿಷತ್‌ಗೂ ಸ್ಪಷ್ಟತೆ ಇರಬೇಕು*

 

*ಮೂರು ದಿನಗಳ ಸಮ್ಮೇಳನ ಮುಗಿದ ಮೇಲೆ ಸಾಮಾನ್ಯವಾಗಿ ಸಮ್ಮೇಳನಾಧ್ಯಕ್ಷರು ನೇಪಥ್ಯಕ್ಕೆ ಸರಿದುಬಿಡುತ್ತಾರೆ. ನಾನು ಹಾಗಾಗಲಾರೆ. ಏಕೆಂದರೆ, ನಾನು ಕ್ರಿಯಾಶೀಲತೆಯಲ್ಲಿ ನಂಬಿಕೆ ಇಟ್ಟಿರುವವನು. ಕನ್ನಡದ ಕೆಲಸಗಳಿಗೆ ಸಂಬಂಧಿಸಿದಂತೆ ಸರಕಾರ, ಇಲಾಖೆ ಇತ್ಯಾದಿಗಳ ಹಂತದಲ್ಲಿ ನಾನಾ ಬಗೆಯ ಅನುಸರಣ ಕಾರ್ಯಕ್ರಮಗಳು ನಡೆಯಲೇಬೇಕು. ಮನವಿ, ಒತ್ತಡ, ಹೋರಾಟ, ಭೇಟಿ, ಆಗ್ರಹ, ಚಿಂತನೆ, ವಿಚಾರ ವಿನಿಮಯ ಇತ್ಯಾದಿಗಳ ರೂಪದಲ್ಲಿ ಇದು ನಡೆಯಬೇಕಾಗುತ್ತದೆ. ಆದ್ದರಿಂದ ಮುಂದಿನ ಸಮ್ಮೇಳನ ಬರುವವರೆಗೂ ನಾನು ಕಸಾಪ ಜತೆ ಸಂಪೂರ್ಣವಾಗಿ ಇರಲಿದ್ದೇನೆ. ಈ ಸಂಗತಿಯನ್ನು ನಾನು ಈಗಾಗಲೇ ಪರಿಷತ್‌ಗೆ ತಿಳಿಸಿದ್ದೇನೆ.*

 

*ಜತೆಗೆ, ಸಮ್ಮೇಳನಾಧ್ಯಕ್ಷರನ್ನು ತಾನು ಹೇಗೆ ರಚನಾತ್ಮಕವಾಗಿ ಬಳಸಿಕೊಳ್ಳಬೇಕು ಎನ್ನುವ ಕಲ್ಪನೆ ಕೂಡ ಪರಿಷತ್‌ಗೆ ಇರಬೇಕು. ಇಲ್ಲದಿದ್ದರೆ ಹೆಚ್ಚಿನ ಪ್ರಯೋಜನವಿಲ್ಲ. ಮುಂಬರುವ ದಿನಗಳಲ್ಲಿ ಪರಿಷತ್ತು ಈ ನಿಟ್ಟಿನಲ್ಲಿ ಹೆಜ್ಜೆ ಇಡಲಿದೆ ಎನ್ನುವ ಆಶಾವಾದ ನನಗಿದೆ. ಆದರೆ, ಸಮ್ಮೇಳನದ ನಿರ್ಣಯಗಳಿಗೆ ಸಲ್ಲದ ಪ್ರಾಶಸ್ತ್ಯವನ್ನು ಕೊಡಬಾರದು. ಅವು ಸಮ್ಮೇಳನದ ಆಶಯಗಳನ್ನು ಸೂಚಿಸುತ್ತವೆಯೇ ವಿನಾ ಆದೇಶಗಳಲ್ಲ. ನಾವು ನಿಜಕ್ಕೂ ಮಾಡಬಹುದಾದಂಥ 2-ವಿಷಯಗಳ ಬಗ್ಗೆ ಗಮನ ಹರಿಸಿದರೆ ಸಾಕು. ಬಳಿಕ ಅವನ್ನು ಸಾಧಿಸಲು ಪಟ್ಟು ಹಿಡಿದು ಕೆಲಸ ಮಾಡಬೇಕಷ್ಟೆ.*

‪+91 974 ……….: *2018ರ ವೇಳೆಗೆ 25,128 ಪೊಲೀಸ್ ಹುದ್ದೆಗಳ ನೇಮಕ*

(Mallikarjun Hulasur)

 

*ವಾರ್ತಾ ಭಾರತಿ Oct 31.2016

 

ಬೆಂಗಳೂರು, ಅ.30: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ಕೇಡರ್‌ಗಳ ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ ರಚನಾತ್ಮಕ ವಾರ್ಷಿಕ ನೇಮಕಾತಿ ಪ್ರಕ್ರಿಯೆ ಯೋಜನೆ ರೂಪಿಸಿದೆ. ಬೆಂಗಳೂರು, ಅ.30: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವಿವಿಕೇಡರ್‌ಗಳಹುದ್ದೆಗಳರ್ತಿಗೆ ರಾಜ್ಯ ಸರಕಾರ ರಚನಾತ್ಮಕ ವಾರ್ಷಿಕ ನೇಮಕಾತಿ ಪ್ರಕ್ರಿಯೆ ಯೋಜನೆ ರೂಪಿಸಿದೆ. ಪೊಲೀಸರ ನೇಮಕಾತಿ ವಾರ್ಷಿಕ ಕ್ರೀಯಾ ಯೋಜನೆ ರೂಪಿಸುವಂತೆ ಈ ಹಿಂದೆ ಹೈಕೋರ್ಟ್ ಸರಕಾರಕ್ಕೆ ಹಲವು ಬಾರಿ ನಿರ್ದೇಶನ ನೀಡಿತ್ತು. ಅದರಂತೆ ಸರಕಾರ ಯೋಜನೆ ಸಿದ್ಧಪಡಿಸಿ ಹೈಕೋರ್ಟ್‌ಗೆ ಸಲ್ಲಿಸಿದೆ.

 

2016ರ ಅ.31ರ ವೇಳೆಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಕೇಡರ್‌ಗಳ ಒಟ್ಟು 25,128 ಹುದ್ದೆಗಳು ಖಾಲಿಯಿವೆ. ಅದರಲ್ಲಿ 2018ರ ಅಂತ್ಯಕ್ಕೆ ನೇರ ನೇಮಕಾತಿ ಮೂಲಕ 19,464 ಮತ್ತು ಬಡ್ತಿ ಮೂಲಕ 4,411 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ನೇಮಕಾತಿಗೆ ಸರಕಾರ 2016ರ ಆ.2ರಂದು ಆದೇಶ ಮಾಡಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

 

ಅಲ್ಲದೆ, ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಪೊಲೀಸ್ ಇಲಾಖೆಯಲ್ಲಿ ವಿವಿಧ ವಿಭಾಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ವರ್ಗೀಕರಿಸಲಾಗುವುದು. ಎಪ್ರಿಲ್ ಎರಡನೆ ವಾರದಿಂದ ನೇಮಕ ಪ್ರಕ್ರಿಯೆ ಆರಂಭಿಸಿ ಡಿಸೆಂಬರ್ ಅಂತ್ಯದೊಳಗೆ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದೇ ಮಾರ್ಗಸೂಚಿಯನ್ನು 2017 ಮತ್ತು 2018 ಸಾಲಿನ ನೇಮಕಾತಿಗೆ ಅನುಸರಿಸಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

 

ಕ್ರಿಯಾ ಯೋಜನೆಯಂತೆ

 

2017ರಲ್ 4,046 ಕಾನ್ಟ್ಸೇಬಲ್,

 

313 ಪಿಎಸ್‌ಐ ಮತ್ತು

 

2018ರಲ್ಲಿ

 

4,045 ಕಾನ್ಟ್ಸೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅದರಲ್ಲಿ

 

164 ಸಬ್ ಇನ್ಸಪೇಕ್ಟರ್ (ಸಿವಿಲ್)

 

38, ಆರ್‌ಎಸ್‌ಐ(ಸಿಎಆರ್/ಡಿಎಆರ್),

 

9 ಪಿಎಸ್‌ಐ, 28 ವಿಶೇಷ ಆರ್‌ಎಸ್‌ಐ(ಕೆಎರ್ಸ್ಸಾಪಿ), ಕೆಎಸ್‌ಐಎಸ್‌ಎಫ್

 

, 69 ಎಸ್‌ಐ,

ಕಾನ್ಟ್ಸೇಬಲ್ 2,111 (ಸಿವಿಲ್),

688 ಎಸಿಪಿ(ಸಿಎಆರ್/ಡಿಎಆರ್),

849 ವಿಶೇಷ ಕೆಎರ್ಸ್ಸಾಪಿ, ಪೊಲೀಸ್ ಕಾನ್ಟ್ಸೇಬಲ್ 395 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸರಕಾರವು ನ್ಯಾಯಪೀಠಕ್ಕೆ ತಿಳಿಸಿದೆ.

‪+91 9  …..: *ಅರ್ಹತೆಯಿದ್ದರೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಗುತ್ತಿಲ್ಲ ಬಡ್ತಿ..*

Nov 01,2106

ವಿಜಯವಾಣಿ’

(Mallikarajun Hulasur)

 

*B.A, B.SC,BED ಪದವೀಧರ ಬೋಧಕರ ನಿರ್ಲಕ್ಷ್ಯ*

( *ಮಲ್ಲಿಕಾರ್ಜುನ ಹುಲಸೂರ*)

 

*ಶಿಕ್ಷಕರಿಗೆ ಶೀರ್ಘವೇ ಬಡ್ತಿ….*

 

*ಪ್ರಾಥಮಿಕ ಶಿಕ್ಷಕರಿಗೆ ಹಿರಿಯ ಪ್ರಾಥಮಿಕ ಶಾಲೆಗೆ(6-8ಕ್ಕೆ) ಬೋಧಿಸಲು ಬಡ್ತಿ ನೀಡುವ ಅಧಿಕಾರ ಆಯಾ ಜಿಲ್ಲಾ ಉಪ ನಿರ್ದೇಶಕರಿಗಿದೆ.ಶೀರ್ಘದಲ್ಲಿ ಬಡ್ತಿ ನೀಡಲಾಗುವುದು.*

 

*ಕೆ.ಆನಂದ. ನಿರ್ದೇಶಕರು.ಸಾ.ಶಿ.ಇಲಾಖೆ*

‪+91 9 …..: What a wonderful post changes my perception on perception … do read

 

A teacher teaching Maths to a six-year-old asked him, “If I give you one apple and one apple & one apple, how many apples will you have?”

 

With a few seconds the boy replied confidently, “Four!”

 

The dismayed teacher was expecting an effortless correct answer (three).

 

She was disappointed. “May be the child did not listen properly,” she thought.

 

She repeated, “pls listen carefully.

 

It i very simple. You will be able to do it right if you listen carefully.

 

If I give you one apple and one apple and one apple, how many apples will you have?”

 

The boy had seen the disappointment on his teacher’s face.

He calculated again on his fingers.

But within him he was also searching for the answer that will make his teacher happy.

This time hesitatingly he replied, “Four…”

The disappointment stayed on teacher’s face.

She remembered that the boy loves strawberries.

She thought maybe he doesn’t like apples and that is making him lose focus.

This time with exaggerated excitement & twinkling eyes she asked …

“If I give you one strawberry & one strawberry & one strawberry, then how many will you have?”

Seeing the teacher happy, the young boy calculated on his fingers again.

There was no pressure on him, but a little on the teacher.

She wanted her new approach to succeed.

With a hesitating smile, the young boy replied, “Three?”

The teacher now had a victorious smile. Her approach had succeeded.

She wanted to congratulate herself.

But one last thing remained.

Once again she asked him, “Now if I give you one apple and one apple and one more apple how many will you have?”

Promptly the answer was “Four!”

The teacher was aghast.

“How…. tell me, How?” she demanded in a little stern and irritated voice.

In a voice that was low and hesitating young boy replied, “Because I already have one apple in my bag.”

Lessons to Learn: When someone gives you an answer that is different from what you are expecting, it is not necessarily they are wrong.

There may be an angle that we may not have understood at all.

We need to learn to appreciate and understand different perspectives.

Quite often, we try and impose our perspectives on others and then wonder what went wrong.

The next time someone gives you a different perspective than yours, sit down and gently ask ” can you please help me understand”?……😊😊

 

Evengelists Group:

Kiran: https://youtu.be/PhO2gshIVuE interesting talk on various techniques which we human beings use to learn things. you can fast forward to 15 mins and watch..

Gururaj Paramesha: 👌

Leave a Reply